Thursday, 8 January 2015

dinank 07-01-2015 randu nati mttu rajya sbha sadsse B. Jaishri namma shala makkala rangachatuvatikegalannu sedamminalli vikshisuttiruwudu..




Sunday, 4 January 2015

ನೇಮಕಾತಿ ಒತ್ತಾಯಿಸಿ ಸಚಿವರಿಗೆ ಮನವಿ ಪತ್ರ

          ನಾಟಕ ಹಾಗೂ ನೃತ್ಯ ಶಿಕ್ಷಕರ ನೇಮಕಾತಿ ಒತ್ತಾಯಿಸಿ ಸಂಘದ ಎಲ್ಲ ಸದಸ್ಯರ ಸಹಿ ಮಾಡಿದ ಪತ್ರವನ್ನು  ನಾಟಕ ಮತ್ತು ನೃತ್ಯ ಸಂಘದ ಬೆಂಗಳೂರು ವಿಭಾಗದ ನಿರ್ದೇಶಕರಾದ ಶ್ರೀಕಾಂತ ಕುಮಟರವರು ಮಾನ್ಯ ಕಿಮ್ಮನೆ ರತ್ನಾಕರ ಶಿಕ್ಷಣ ಸಚಿವರಿಗೆ ಮನವಿ ಪತ್ರವನ್ನು ಸಲ್ಲಿಸುತ್ತಿರುವುದು.  ದಿನಾಂಕ ೧೬/೦೯/೨೦೧೪


ನಿರಂತರ ರಾಷ್ಟ್ರೀಯ ರಂಗ ಉತ್ಸವ

ಮೈಸೂರಿನಲ್ಲಿ ನಡೆದ ನಿರಂತರ ರಾಷ್ಟ್ರೀಯ ರಂಗ ಉತ್ಸವದಲ್ಲಿ  ನಮ್ಮ ನಾಟಕ ಹಾಗೂ ನೃತ್ಯ ಶಿಕ್ಷಕರು ಭಾಗವಹಿಸಲು ಅವಕಾಶ ನೀಡಿದ್ದು ಅದರ ಕೆಲವು ಚಿತ್ರಗಳು ಇಲ್ಲಿವೆ. ಉತ್ಸವ ಆಯೋಜಿಸಿದ್ದ  ನಿರಂತರದ ಎಲ್ಲ ಬಳಗಕ್ಕೂ ನಮ್ಮ ಸಂಘದವತಿಯಿಂದ ಅಭಿನಂದನೆಗಳನ್ನು ತಿಳಿಸುತ್ತಾ ತಮ್ಮ ಸಂಘಟನಾ ಶಿಸ್ತಿಗೆ ನಾವು ಶರಣು ಹೇಳುತ್ತೇವೆ.







Friday, 19 December 2014

ರಾಜ್ಯ ಮಟ್ಟದ ಪ್ರತಿಭಾಕಾರಂಜಿ

ರಾಜ್ಯ ಮಟ್ಟದ ಪ್ರತಿಭಾಕಾರಂಜಿಯಲ್ಲಿ ನಾಟಕದ ಶಿಕ್ಷಕರು ರಂಗಗೀತೆಗಳನ್ನು ಹಾಡುವುದರ ಮುಖಾಂತರ ನಾಟಕ ಸ್ಪರ್ದೆಗೆ ಚಾಲನೆ ನೀಡಿದರು

Sunday, 23 November 2014

ರಾಜ್ಯ ಮಟ್ಟದ ವಿಜ್ಞಾನ ನಾಟಕ

ಮಂಗಳೂರಿನಲ್ಲಿ ದಿ.22-11-2014 ರಂದು ಪ್ರೌಢ ಶಾಲಾ ವಿಧ್ಯಾರ್ಥಿಗಳ ರಾಜ್ಯ ಮಟ್ಟದ ವಿಜ್ಞಾನ ನಾಟಕ ಸ್ಪರ್ಧೆಯಲ್ಲಿ ನಮ್ಮ ಶಾಲಾ ಮಕ್ಕಳ 'ಬಲಲಲ ಬಲಿಯೇ' ನಾಟಕಕ್ಕೆ ತೃತಿಯ ಬಹುಮಾನ ದೊರತಿದೆ.  ಇಲ್ಲಿ ಆ ನಾಟಕ ಕೆಲ ದೃಶ್ಯಗಳು.






ರಾಜ್ಯ ಮಟ್ಟದ ವಿಜ್ಞಾನ ನಾಟಕ ಸ್ಪರ್ಧೆ

ಮಂಗಳೂರಿನಲ್ಲಿ ದಿ.22-11-2014 ರಂದು ನಡೆದ ಪ್ರೌಢ ಶಾಲಾ ವಿಧ್ಯಾರ್ಥಿಗಳ ರಾಜ್ಯ ಮಟ್ಟದ ವಿಜ್ಞಾನ ನಾಟಕ ಸ್ಪರ್ಧೆಯಲ್ಲಿ ಗುಲ್ಬರ್ಗಾ ವಿಭಾಗದಿಂದ ನಮ್ಮ ಶಾಲಾ ಮಕ್ಕಳ ತಂಡ ಪ್ರದರ್ಶಿಸಿದ 'ಬಲಲಲ ಬಲಿಯೇ' ನಾಟಕಕ್ಕೆ ತೃತಿಯ ಬಹುಮಾನ ದೊರತಿದೆ.



Saturday, 15 November 2014

ದೊಡ್ಡಾಟದ ಪ್ರಸಾದನ ತರಬೇತಿ

ದೊಡ್ಡಾಟ ಕಲಿ-ಕಲಿಸು ಯೋಜನೆಯಲ್ಲಿ ಇಂದು ದಿ.15-11-2014ರಂದು ಬೆಳಿಗ್ಗೆ 8-30 ರಿಂದ 11 ಗಂಟೆಯ ವರೆಗೆ ನಾಚವಾರದ ಪಂಪಯ್ಯ ಸ್ವಾಮಿಯವರಿಂದ ಶಾಲಾ ಮಕ್ಕಳಿಗೆ ದೊಡ್ಡಾಟ ಪ್ರಸಾದನದ ತರಬೇತಿ ನೀಡಲಾಯಿತು.  ಐ.ಎಪ್.ಎ ಬೆಂಗಳೂರು ಮತ್ತು ನಾನು-ನಮ್ಮೂರು ಶಾಲಾ ಮಕ್ಕಳ ವೇದಿಕೆಯ ಸಹಯೋಗದಲ್ಲಿ ಈ ಕಾರ್ಯಕ್ರಮ ಜರುಗಿತಲು.  ನಂತರ ಮಕ್ಕಳು ಒಬ್ಬರಿಗೋಬ್ಬರು ಬಣ್ಣ ಹಚ್ಚಿಕೊಂಡು ಗ್ರಾಮದಲ್ಲಿ ಮೆರವಣಿಗೆ ಮಾಡಿ ಅದರ (ಕಲಿಕೆಯ) ಅನುಭವವನ್ನು ಗ್ರಾಮಸ್ಥರಿಗೆ ಹೆಳಲಾಯಿತು.