Monday, 17 April 2017
Tuesday, 20 September 2016
ನಾಟಕ ಶಿಕ್ಷಕರ ನೇಮಕಕ್ಕೆ ಮನವಿ
ಇಂದು ನಮ್ಮ ಶಾಲೆಗೆ ಶಿಕ್ಷಕರ ಕ್ಷೇತ್ರದಿಂದ ಚುನಾಯಿತರಾಗಿದ್ದ ಶ್ರೀ ಶರಣಪ್ಪ ಮಟ್ಟೂರು ಅವರು ಆಗಮಿಸಿದ್ದರು. ಅವರೊಂದಿಗೆ ಮಾತನಾಡುತ್ತಾ
'ರಾಜ್ಯದಲ್ಲಿ ನಾಟಕ ಶಿಕ್ಷಕರನ್ನು ಕಳೆದ ೨೦೦೮ ರಲ್ಲಿ ನೇಮಕ ಮಾಡಿದ ನಂತರ ಮತ್ತೇ ಗಮನನೇ ನೀಡಲಿಲ್ಲ ಹಾಗಾಗಿ ಹೊಸ ನೇಮಕಾತಿ ಕುರಿತು ತಾವು ಚರ್ಚೆಯನ್ನು ಎತ್ತಿ ಎಂದು ಮನವಿಯನ್ನು ಮಾಡುತ್ತಾ, ಈಗ ಕಾರ್ಯ ನಿರ್ವಹಿಸುತ್ತಿರುವ ನಾಟಕ ಶಿಕ್ಷಕರ ಕಾರ್ಯ ಚಟುವಟಿಕೆಗಳನ್ನು ಗಮನಿಸಿ ಎಲ್ಲರೂ ಸಂಪೂರ್ಣವಾಗಿ ತೊಡಗಿಸಿಕೊಂಡು ಬೋಧನೆ ಜೊತೆಗೆ ಪ್ರಾಯೋಗಿಕವಾಗಿ ಮಕ್ಕಳನ್ನು ತೊಡಗಿಸಿರುವಂತದ್ದು. ಮಕ್ಕಳಿಂದ ಸೃಜನಶೀಲ ಕಾರ್ಯಗಳು ನಿರಂತರವಾಗಿ ಹೊರ ತರುವಲ್ಲಿ ಪ್ರಮಾಣಿಕವಾಗಿ ಪ್ರಯತ್ನ ನಡೆಸುತ್ತಿರುವ ಕುರಿತು ಮನವರಿಕೆ ಮಾಡಿದೆ. ಆದರೆ ಸನ್ಮಾನ್ಯರಿಂದ ವೃತ್ತಿ ಶಿಕ್ಷಕರ ಕುರಿತು ಅಂಥಹ ಆಶಾ ಭಾವನೆ ಕಂಡು ಬರಲಿಲ್ಲ. ನಾನು ರಾಜ್ಯದಲ್ಲಿ ಇರುವ ಎಲ್ಲ ನಾಟಕ ಶಿಕ್ಷಕರ ಕಾರ್ಯ ವೈಖರಿ ಬಗ್ಗೆ ಅಧ್ಯಯನ ಮಾಡಲು ಮನವಿ ಮಾಡಿರುವೆ.
Saturday, 17 September 2016
Thursday, 8 September 2016
ನಂಜನಗೂಡಿನ ಹೆಮ್ಮರಗಾಲ ಶಾಲೆ
ಇವತ್ತು ಮಯ್ಸೂರಿನ ಡಯಟ್ ಆವರಣದಲ್ಲಿ ನಡೆದ ಮಯ್ಸೂರು ಜಿಲ್ಲಾಮಟ್ಟದ ಪ್ರೌಢಶಾಲಾ ಮಕ್ಕಳ ವಿಜ್ಞಾನ ನಾಟಕ ಸ್ಪರ್ಧೆಯಲ್ಲಿ ನಮ್ಮ ಶಾಲೆಯ ಮಕ್ಕಳು ಪ್ರದರ್ಶಿಸಿದ "ಜಟ್ರೋಫ ಎಂಬ ವರ" ನಾಟಕ ಪ್ರಥಮ ಸ್ಥಾನ ಪಡೆದು ವಿಭಾಗಮಟ್ಟಕ್ಕೆ ಆಯ್ಕೆಯಾಗಿದ್ದಾರೆ. ಹಸಿರು ಶಕ್ತಿ ವಿಷಯದ ಮೇಲೆ ಬಯೋ ಡಿಸೇಲ್ ತಯಾರಿಕೆಯ ಕುರಿತು ನಮ್ ಮಕ್ಕಳ ನಾಟಕವಿತ್ತು.
ನಿರ್ದೇಶನ - ಸಂತೋಷ ಗುಡ್ಡಿಯಂಗಡಿ

