ಕರ್ನಾಟಕ ನಾಟಕ ಅಕಾಡೆಮಿ ನೇತೃತ್ವದಲ್ಲಿ ರಾಜ್ಯ ಮಟ್ಟದ ಪ್ರೌಢಶಾಲಾ ವಿದ್ಯಾರ್ಥಿಗಳ ನಾಟಕ ಸ್ಪರ್ಧೆ ಏರ್ಪಡಿಸಲಾಗಿತ್ತು. ಅದರಲ್ಲಿ ನಮ್ಮ ನಾಟಕ ಶಿಕ್ಷಕರಾದ ಕಲಬುರಗಿ ಜಿಲ್ಲೆ ಚಿತ್ತಾಪುರ ತಾಲೂಕಿನ ರಾಜಾಪೂರ ಪ್ರೌಢಶಾಲೆಯಿಂದ ರಾಘವೇಂದ್ರ ಹಳೇಪೇಟೆ ಅವರು ರಚಿಸಿ ನಿರ್ದೇಶಿಸಿದ ನಾಟಕ "ಚಿಂದಿ" ಅತ್ಯುತ್ತಮ ಕಥಾವಸ್ತು ಹೊಂದಿದ್ದು ಮಕ್ಕಳು ನೈಜವಾದ ಅಭಿನಯ ಮನ ಮುಟ್ಟುವಂತೆ ಇತ್ತು. ಚಿತ್ರದುರ್ಗ ಜಿಲ್ಲೆಯ ಹೊಳಲ್ಕೆರೆ ತಾಲ್ಲೂಕಿನ ಘಟ್ಟಿಹೊಸಹಳ್ಳಿಯಿಂದ ಉದಯ ಗಾವಂಕರ ರಚಿಸಿದ ನಾಟಕ "ನಾವೆಲ್ಲ ಒಂದೇ" ನಾಟಕವನ್ನು ಚಿನ್ನಾ ಬಿ ಎಚ್ ಅವರ ನಿರ್ದೇಶನದಲ್ಲಿ ವ್ಯವಸ್ಥಿತವಾಗಿ ಮಕ್ಕಳು ಅಭಿನಯದ ಮೂಲಕ ಕಟ್ಟಿ ಕೊಟ್ಟರು. ವಿಜಯನಗರ ಜಿಲ್ಲೆ ಕೂಡ್ಲಿಗಿ ತಾಲೂಕಿನ ಬಡೇಲಡಕು ಪ್ರೌಢಶಾಲಾ ಮಕ್ಕಳು "ಹಲಗಲಿಯ ಬೇಡರು" ನಾಟಕವನ್ನು ಶಿವನಾಯಕ ದೊರೆ ಅವರ ನಿರ್ದೇಶನದಲ್ಲಿ ಅಭಿನಯಿಸಿದರು. ಎಲ್ಲ ರಂಗ ಶಿಕ್ಷಕರಿಗೆ ಅಭಿನಂದನೆಗಳು.
No comments:
Post a Comment