Monday 20 April 2015

ಬದನಾಳು ಸತ್ಯಾಗ್ರಹ







ಬದನವಾಳು ಸುಸ್ಥಿರ ಬದುಕಿನ ರಾಷ್ಟೀಯ ಸಮಾವೇಶದ ಪ್ರತಿಜ್ಞೆಗಳು

ನೀವು ಇವುಗಳಲ್ಲಿ ಕೆಲವನ್ನು ಆಚರಣೆಗೆ ತಂದುಕೊಳ್ಳಬಹುದು.
* ಶ್ರಮ ಸಹಿತವಾದ ಸರಳ ಬದುಕನ್ನು ಶ್ರದ್ಧೆಯಿಂದ ಬಾಳುತ್ತೇನೆ.
* ಅದ್ದೂರಿ ಸಭೆ ಸಮಾರಂಭಗಳನ್ನು ಮಾಡುವುದಿಲ್ಲ, ಮದುವೆಯನ್ನೂ ಸರಳವಾಗಿ ಮಾಡುತ್ತೇನೆ.
* ಅಂಗಡಿಗೆ ಹೋಗುವಾಗ ಕೈಚೀಲ ಒಯ್ಯುತ್ತೇನೆ, ಪ್ಲಾಸ್ಟಿಕ್ ಕ್ಯಾರಿ ಬ್ಯಾಗುಗಳನ್ನು ಬಳಸುವುದಿಲ್ಲ.
* ದುಂದುವೆಚ್ಚ ಮಾಡುವುದಿಲ್ಲ.
* ಸಿರಿಧಾನ್ಯಗಳನ್ನು ಬೆಳೆಸುತ್ತೇವೆ ಹಾಗೂ ಸೇವಿಸುತ್ತೇವೆ.
* ಹಾನಿಕಾರಕ ರಾಸಾಯನಿಕ ಗೊಬ್ಬರ ಹಾಗೂ ಕೀಟನಾಶಕಗಳನ್ನು ಬಳಸುವುದಿಲ್ಲ.
* ಮಣ್ಣು ಮತ್ತು ನೀರಿನ ಸಂರಕ್ಷಣೆಯಲ್ಲಿ ಭಾಗವಹಿಸುತ್ತೇನೆ.
* ಕೀಳು ಮನೋರಂಜನೆ ಬದಲಾಗಿ ಸಾಂಸ್ಕೃತಿಕ ಕಾರ್ಯಕ್ರಮಗಳಲ್ಲಿ ಪಾಲ್ಗೋಳ್ಳುತ್ತೇನೆ.
* ಬಟ್ಟೆ ಹೊಲಿಯುವಂತಹ ಅಥಾವ ಬುಟ್ಟಿ ನೇಯುವಂತಹ ಒಂದು ಕೈ ಕಸಬು ಕಲಿತುಕೊಳ್ಳುತ್ತೇನೆ.
* ಮತ್ತೋಬ್ಬರ ಶ್ರಮದ ಫಲವನ್ನು ಕದಿಯುವುದಿಲ್ಲ ಅಥಾವ ಅದರಿಂದ ಸುಖ ಪಡುವುದಿಲ್ಲ.
* ಅತ್ಯವಶ್ಯಕವಾದ ವಸ್ತುಗಳನ್ನು ಮಾತ್ರ ಕೊಳ್ಳುತ್ತೇನೆ, ಅನಗತ್ಯ ವಸ್ತುಗಳನ್ನು ಖರೀದಿಸುವುದಿಲ್ಲ.
* ನೀರನ್ನು ಮತ್ತು ವಿದ್ಯುಚ್ಛಕ್ತಿಯನ್ನು ಮಿತವಾಗಿ ಬಳಕೆ ಮಾಡುತ್ತೇವೆ.
* ನನ್ನ ಕೈಲಾದಷ್ಟು ಗಿಡಮರಗಳನ್ನು ನೆಟ್ಟು ಬೆಳೆಸುತ್ತೇನೆ.
* ಸಣ್ಣ ಪುಟ್ಟ ದೂರವನ್ನು ಕ್ರಮಿಸಲು ವಾಹನ ಬಳಸುವುದಿಲ್ಲ, ನಡೆದು ಅಥವಾ ಬೈಸಿಕಲ್ ನಲ್ಲಿ ಹೋಗುತ್ತೇನೆ.
* ನನ್ನ ಶೌಚಾಲಯವನ್ನು ನಾನು ಸ್ವತಃ ಸ್ವಚ್ಛಗೊಳಿಸುತ್ತೇನೆ.
* ಮನೆಯ ಛಾವಣಿಯ ಮೇಲೆ ಬೀಳುವ ಮಳೆ ನೀರನ್ನು ಸಂಗ್ರಹಿಸಿ ಬಳಸುತ್ತೇನೆ.
* ಗೃಹಕೃತ್ಯಕ್ಕೆ, ಸ್ನಾನ ಇತ್ಯಾದಿಗಳಿಗೆ ಬಳಸಿದ ನೀರನ್ನು ಗಿಡಮರಗಳಿಗೆ ಉಣಿಸುತ್ತೇನೆ.
* ಪ್ಯಾಕೆಟ್ ಗಳಲ್ಲಿ ಮಾರಲಾಗುವ ಕೃತಕ ಆಹಾರಗಳನ್ನು ತಿನ್ನುವುದಿಲ್ಲ.
* ಪಾರಂಪರಿಕ ಸಾಗುವಳಿ ಪದ್ಧತಿಗಳನ್ನು ಹಾಗು ಬೀಜ ಸಂರಕ್ಷಣಾ ವಿಧಾನಗಳನ್ನು ಬಲ್ಲವರಿಂದ ಕಲಿತುಕೊಳ್ಳುವ ಪ್ರಯತ್ನಮಾಡುತ್ತೇವೆ.