Sunday 17 January 2021

ರಂಗ ಮುಖೇನ ಶಿಕ್ಷಣ , ನನ್ನ ಕ್ಷೇತ್ರ ನನ್ನ ಅನುಭವ






ಆತ್ಮೀಯರೆ ಆದಿಮಾ ಸಾಂಸ್ಕೃತಿಕ  ಕಲಾ ಸಂಸ್ಥೆ ಆಯೋಜಿಸಿದ  ಎರಡು ದಿನಗಳ  ರಂಗ ಮುಖೇನ ಶಿಕ್ಷಣ , ನನ್ನ ಕ್ಷೇತ್ತ ನನ್ನ ಅನುಭವ ಕುರಿತ ಕಾರ್ಯಾಗಾರದಲ್ಲಿ  ಭಾಗವಹಿಸಿದ ೧೮ ಮಂದಿ ನಾಟಕ ಶಿಕ್ಷಕರು ಮತ್ತು ಇಬ್ಬರು ನೃತ್ಯ ಶಿಕ್ಷಕರು   ಕ್ಷೇತ್ರ ಅನುಭವವನ್ನು ಅತ್ಯಂತ ಪರಿಣಾಮಕಾರಿಯಾಗಿ ಮಂಡಿಸಿದೆವು. ಶಿಬಿರದ ನಿರ್ದೇಶಕರಾದ ಶ್ರೀ ರಾಜಪ್ಪ ದಳವಾಯಿ ಸರ್ ಹಾಗು ಶ್ರೀ ಲಕ್ಷ್ಮೀಪತಿ ಕೋಲಾರ ಇವರುಗಳ ನೀರೀಕ್ಷೆ ಇದ್ದಿದ್ದು ಆದಿಮ ಸಾಂಸ್ಕೃತಿಕ ಕೇಂದ್ರದಲ್ಲಿ ಬೆಂಗಳೂರು ಉತ್ತರ ವಿಭಾಗ ವಿಶ್ವವಿದ್ಯಾಲಯದ ಸಹಯೋಗದೊಂದಿಗೆ   ರಂಗಶಿಕ್ಷಣದಲ್ಲಿ ಸ್ನಾತಕೋತ್ತರ ಡಿಪ್ಲೋಮಾ ಪದವಿಯನ್ನು ನೀಡಲು ತಯಾರಿ ನಡೆಸಿರುವ ಹಿನ್ನೆಲೆಯಲ್ಲಿ ಅದರಲ್ಲಿ ಶಿಕ್ಷಣದಲ್ಲಿ ರಂಗಕಲೆ ವಿಶಯದ ಪಠ್ಯ ಕ್ರಮವನ್ನು ನಿಗದಿ ಪಡಿಸಲು ನಾಟಕ ಶಿಕ್ಷಕರಾದ ನಮ್ಮ ಅನುಭವವನ್ನು ಆದರಿಸಿ ನಮ್ಮೆಲ್ಲರ ಸಲಹೆಗಳನ್ನು ಮುಕ್ತ ಮನಸಿನಿಂದ ಸ್ವಾಗತಿಸಿ, ಮುಂದಿನ ದಿನಗಳಲ್ಲಿ ಇದನ್ನು ಎರಡನೇ ಹಂತಕ್ಕೆ ವಿಸ್ತರಿಸಿ ಇನ್ನೂ ಪರಿಪೂರ್ಣವಾದ ಪರಿಪಕ್ವವಾದ ವ್ಯವಸ್ಥಿತ ಪಠ್ಯಕ್ರಮವನ್ನು ರೂಪಿಸುವ ಭರವಸೆಯನ್ನು ಹೊಂದಿದ್ದಾರೆ. ಇದು ನಿಜಕ್ಕೂ ಸಂತೋಷದ ವಿಷಯ. ಇದೇ ಕಾರ್ಯಾಗಾರದಲ್ಲಿ ಶಿಭಿರಾರ್ಥಿಯಾಗಿ ಭಾಗವಹಿಸಿದ ರಾಜ್ಯ ಉತ್ತಮ ಶಿಕ್ಷಕ ಪ್ರಶಸ್ತಿ ಪುರಸ್ಕೃತ ಹಾಗೂ  ಸದಾ ನಮ್ಮೆಲ್ಲರನ್ನು ನಗೆಗಡಲಲ್ಲಿ ತೇಲಿಸುವ ಹಸನ್ಮುಖಿ ಆತ್ಮೀಯ ಗೆಳೆಯ ಸ್ವರ ( ವೆಂಕಟೇಶ್ವರ ಕೆ) ಇವರನ್ನು ಶಿಬಿರದ ಸಮಾರೋಪ  ಸಮಾರಂಭದಲ್ಲಿ  ರಂಗ ದಿಗ್ಗಜರ  ಸಮ್ಮುಖದಲ್ಲಿ ಸನ್ಮಾನಿಸಲಾಯಿತು. ಅಂತೆಯೇ ಇಷ್ಟು ವರ್ಷಗಳ ಕಾಲ ರಂಗ ಶಿಕ್ಷಕರಾಗಿ ಸೇವೆ ಸಲ್ಲಿಸಿ ಸರ್ಕಾರಿ ಸೇವೆಯಿಂದ  ನಿವೃತ್ತರಾದರಾಗಿದ್ದರೂ, ರಂಗಕಾಯಕದಲ್ಲಿ ಕ್ರಿಯಾಶೀಲ ರಾಗಿ ತೊಡಗಿಸಿಕೊಂಡಿರುವ ಹಿರಿಯರಾದ  ನಾ ಶ್ರೀನಿವಾಸ ಇವರನ್ನು ಗೌರವಿಸಲಾಯಿತು. ಇಬ್ಬರಿಗೂ ಹಾರ್ದಿಕ ಅಭಿನಂದನೆಗಳು.ಗೆಳೆಯರೆ ಮುಂದಿನ ಹಂತದಲ್ಲಿ ಎಲ್ಲರೂ ಸೇರೋಣ . ನಿಜಕ್ಕೂ ನಾವು ಇಂತಹ ನೆಪಗಳ ಮೂಲಕವಾದರೂ ಮತ್ತೆ ಮತ್ತೆ ಸೇರಿದರೆ ಪರಸ್ಪರ ವಿಚಾರ ವಿನಿಮಯ ಮಾಡಲು ಅನುವಾಗುತ್ತದೆ.




 

Group ph