Thursday 29 March 2018

ವಿಶ್ವ ರಂಗಭೂಮಿ ದಿನಾಚರಣೆ - ಪತ್ರಿಕಾ ವರದಿ


Thanks for the Manjunatha Mahalingapura, Reporter,Udayavani Daily Paper,  Kushtagi

ವಿಶ್ವ ರಂಗಭೂಮಿ ದಿನಾಚರಣೆ

ಸರಕಾರಿ ಪ್ರೌಢಶಾಲೆ, ಜಹಗೀರ ಗುಡದೂರ
ಮಾರ್ಚ್‌ ೨೭ ಇಂದು ನಮ್ಮ ಸರಕಾರಿ ಪ್ರೌಢಶಾಲೆಯಲ್ಲಿ ವಿಶ್ವ ರಂಗಭೂಮಿ ದಿನಾಚರಣೆಯನ್ನು ಆಚರಿಸಲಾಯಿತು. ಕಾರ್ಯಕ್ರಮದಲ್ಲಿ ಎಂಟನೇ ತರಗತಿ ವಿದ್ಯಾರ್ಥಿಗಳು  'ಕವನ ವಾಚನ ' ವನ್ನು ಪ್ರಸ್ತುತ ಪಡಿಸಿದರು. ಸಿರಿಯಾ ದೇಶದ ಮಕ್ಕಳ ಮಾರಣಹೋಮವನ್ನು ಖಂಡಿಸಿ ತಮ್ಮ ಕವನಗಳನ್ನು ಪ್ರಸ್ತುತ ಪಡಿಸಿದರು. 
  ರಂಗಭೂಮಿಯು ಜಗತ್ತಿನಲ್ಲಿ ನಡೆಯುವ ಅಮಾನವೀಯ ಘಟನೆಗಳನ್ನು ಪ್ರತಿರೋಧ ತೋರಿಸುವಲ್ಲಿ ಮೊದಲಾಗಿರುತ್ತದೆ ಎಂದು ಮುಖ್ಯೋಪಾಧ್ಯಾಯರಾದ ಈಶಪ್ಪ ತಳವಾರ ಅವರು ತಮ್ಮ ಮಾತುಗಳಲ್ಲಿ ತಿಳಿಯಪಡಿಸಿದರು.
  ಪ್ರಸ್ತಾವಿಕವಾಗಿ ಮಾತನಾಡಿದ ನಾಟಕ ಶಿಕ್ಷಕ ಗುರುರಾಜ ಅವರು ರಂಗಭೂಮಿ ಜೀವನ ಮೌಲ್ಯಗಳನ್ನು ಕಲಿಸುತ್ತದೆ. ಇಂದಿನ ದಿನಮಾನದಲ್ಲಿ ಯಾವುದೇ ತುಡಿತವಿಲ್ಲದೆ ಬದುಕುವವರಿಗೆ ಜಗತ್ತಿನ ಎಲ್ಲ ಸಮಸ್ಯೆಗಳಿಗೆ ಸ್ಪಂದಿಸುವ ಮನಸ್ಥಿತಿಯನ್ನು ಒದಗಿಸಿ ಕೊಡುವುದು ರಂಗಭೂಮಿ. ವಿಶ್ವ ರಂಗಭೂಮಿಯ ದಿನದಂದು ಮಾತ್ರ ರಂಗಭೂಮಿಯ ಕಾರ್ಯ ಮಾಡದೇ ಪ್ರತಿ ಗಳಿಗೆಯು ಜೀವಂತಿಕೆಯಿಂದ ಬದುಕುವ ಕಾರ್ಯವಾಗಬೇಕು ಎಂದು ಗುರುರಾಜ ಅವರು ತಿಳಿಸಿದರು.
   ಈ ಬಾರಿ ನಮ್ಮ ದೇಶದ ರಂಗಕರ್ಮಿ ಶ್ರೀಯುತ ರಾಮಗೋಪಲ್ ಬಜಾಜ್ ಅವರು ನೀಡಿದ ಸಂದೇಶವನ್ನು ಕನ್ನಡ ಶಿಕ್ಷಕರಾದ ಮರಿಯಪ್ಪ ಜರಕುಂಟಿ ಯವರು ಎಲ್ಲರೊಂದಿಗೆ ಹಂಚಿಕೊಂಡರು.
   ವಿದ್ಯಾರ್ಥಿಗಳಿಂದ ಕವನ ವಾಚನ ಪ್ರಸ್ತುತ ಪಡಿಸಲಾಯಿತು. ಮಕ್ಕಳ ಮೇಲೆ ನಡೆಯುತ್ತಿರುವ ಅಮಾನುಷ ಕೃತ್ಯ, ಹಿಂಸೆಯನ್ನು ವಿರೋಧಿಸಿ ಬದಲಾಗಬೇಕಾದ ನವ ಸಮಾಜದ ನಿರ್ಮಾಣಕ್ಕೆ ಹೊಸ ಮುನ್ನುಡಿಯನ್ನು ಮಕ್ಕಳ ಕವನ ವಾಚನದಲ್ಲಿ ಎದ್ದು ಕಾಣುತ್ತಿತ್ತು. ಇದರ ನಿರ್ದೇಶನವನ್ನು ನಾಟಕ ಶಿಕ್ಷಕರಾದ ಗುರುರಾಜ ಅವರು ಮಾಡಿದ್ದರು. ಕಾರ್ಯಕ್ರಮ ದಲ್ಲಿ ಜಗದೀಶ್, ಶ್ರೀದೇವಿ ಗುಳಬಾಳ, ತಿಪ್ಪಣ್ಣ ರಾಮದುರ್ಗ, ಪ್ರಶಾಂತ ಕಟ್ಟಿ ಹಾಗೂ ಸ್ಥಳೀಯ ಗ್ರಾಮದ ಹಿರಿಯರು ಉಪಸ್ಥಿತರಿದ್ದರು.

Friday 16 March 2018

Shrikanth kumta: GHS KONANDUR Savi Savi Nenapu Part 2 ಸವಿ ಸವಿ ನೆನಪು...

Shrikanth kumta: GHS KONANDUR Savi Savi Nenapu Part 2 ಸವಿ ಸವಿ ನೆನಪು...

ನಾಟಕ
ರಾಘವಾಂಕನ
 "ಸತ್ಯ ಹರಿಶ್ಚಂದ್ರ"
ನಿರ್ದೇಶನ : ಶ್ರೀಕಾಂತ್ ಕುಮಟಾ
ಅಭಿನಯ: ತುಂಗಾ ಮಹಾ ವಿದ್ಯಾಲಯ ತೀರ್ಥಹಳ್ಳಿ