Wednesday 2 December 2015

Facebook ನಲ್ಲಿ 500 ಗಡಿ ದಾಟಿದ ನಮ್ಮ ಹೆಜ್ಜೆಗಳು ಪೇಜ್


ಹೆಜ್ಜೆಗಳು ಬ್ಲಾಗ್ ನಂತರ ಫೇಸ್ ಬುಕ್ ನಲ್ಲಿ ಹೆಜ್ಜೆಗಳು ಪೇಜ್ ಅನ್ನು ರಚಿಸಿ, ನಮ್ಮ ಸಾಕಷ್ಟು ಚಟುವಟಿಕೆಗಳನ್ನು ನಿರಂತರವಾಗಿ ದಾಖಲಿಸುತ್ತಾ ಬಂದಿದ್ದೇವೆ.  ಲೈಕಿಸಿದವರ ಸಂಖ್ಯೆ ಈಗ 500 ರ ಗಡಿ ದಾಟಿದ್ದು ನಮ್ಮ ಕಾರ್ಯ ಚಟುವಟಿಕೆಗೆ ಸಾಕಷ್ಟು ಪ್ರೋತ್ಸಾಹ ನೀಡಿದಂತಾಗಿದೆ. ಎಲ್ಲರಿಗೂ ಅಭಿನಂದಿಸುತ್ತಾ, ನಮ್ಮ ಚಟುವಟಿಕೆಗಳನ್ನು ಇನ್ನಷ್ಟು ಉತ್ತಮಗೊಳಿಸಲು ಸಲಹೆ - ಸೂಚನೆಗಳನ್ನು ನೀಡಿರೆಂದು ಬಯಸುವ


ನಿಮ್ಮಯ
ಗುರುರಾಜ್

Friday 27 November 2015

ಸುಸಾನ್ ಚುಂಗ್ AAA ( Asia Art Archive ) ಜೊತೆ

ಮೊನ್ನೆ ದಿನಾಂಕ 18.11.2015 ರಂದು ಬೆಂಗಳೂರಿನ IFA ಕಛೇರಿಯಲ್ಲಿ ಹಾಂಕಾಂಗ್ ನಿಂದ ಆಗಮಿಸಿದ್ದ ಸುಸಾನ್ ಚುಂಗ್ AAA ( Asia Art Archive ) ಸಂಸ್ಥೆಯ ಮುಖ್ಯಸ್ಥರು ಅವರೊಂದಿಗೆ ನಮ್ಮ ಕಾರ್ಯ ಚಟುವಟಿಕೆಗಳ ಬಗ್ಗೆ ಹಂಚಿಕೊಳ್ಳುತ್ತಾ, "ಮಕ್ಕಳ ಹೆಜ್ಜೆಗಳು ಜಾನಪದದತ್ತ... " ಸಾಕ್ಷ್ಯಚಿತ್ರವನ್ನು ತೋರ್ಪಡಿಸಿದ ಸಮಯ. ನನಗೆ ಅಂದು ವಿಶೇಷ ದಿನವೇ ಆಗಿತ್ತು.

Monday 20 April 2015

ಬದನಾಳು ಸತ್ಯಾಗ್ರಹ







ಬದನವಾಳು ಸುಸ್ಥಿರ ಬದುಕಿನ ರಾಷ್ಟೀಯ ಸಮಾವೇಶದ ಪ್ರತಿಜ್ಞೆಗಳು

ನೀವು ಇವುಗಳಲ್ಲಿ ಕೆಲವನ್ನು ಆಚರಣೆಗೆ ತಂದುಕೊಳ್ಳಬಹುದು.
* ಶ್ರಮ ಸಹಿತವಾದ ಸರಳ ಬದುಕನ್ನು ಶ್ರದ್ಧೆಯಿಂದ ಬಾಳುತ್ತೇನೆ.
* ಅದ್ದೂರಿ ಸಭೆ ಸಮಾರಂಭಗಳನ್ನು ಮಾಡುವುದಿಲ್ಲ, ಮದುವೆಯನ್ನೂ ಸರಳವಾಗಿ ಮಾಡುತ್ತೇನೆ.
* ಅಂಗಡಿಗೆ ಹೋಗುವಾಗ ಕೈಚೀಲ ಒಯ್ಯುತ್ತೇನೆ, ಪ್ಲಾಸ್ಟಿಕ್ ಕ್ಯಾರಿ ಬ್ಯಾಗುಗಳನ್ನು ಬಳಸುವುದಿಲ್ಲ.
* ದುಂದುವೆಚ್ಚ ಮಾಡುವುದಿಲ್ಲ.
* ಸಿರಿಧಾನ್ಯಗಳನ್ನು ಬೆಳೆಸುತ್ತೇವೆ ಹಾಗೂ ಸೇವಿಸುತ್ತೇವೆ.
* ಹಾನಿಕಾರಕ ರಾಸಾಯನಿಕ ಗೊಬ್ಬರ ಹಾಗೂ ಕೀಟನಾಶಕಗಳನ್ನು ಬಳಸುವುದಿಲ್ಲ.
* ಮಣ್ಣು ಮತ್ತು ನೀರಿನ ಸಂರಕ್ಷಣೆಯಲ್ಲಿ ಭಾಗವಹಿಸುತ್ತೇನೆ.
* ಕೀಳು ಮನೋರಂಜನೆ ಬದಲಾಗಿ ಸಾಂಸ್ಕೃತಿಕ ಕಾರ್ಯಕ್ರಮಗಳಲ್ಲಿ ಪಾಲ್ಗೋಳ್ಳುತ್ತೇನೆ.
* ಬಟ್ಟೆ ಹೊಲಿಯುವಂತಹ ಅಥಾವ ಬುಟ್ಟಿ ನೇಯುವಂತಹ ಒಂದು ಕೈ ಕಸಬು ಕಲಿತುಕೊಳ್ಳುತ್ತೇನೆ.
* ಮತ್ತೋಬ್ಬರ ಶ್ರಮದ ಫಲವನ್ನು ಕದಿಯುವುದಿಲ್ಲ ಅಥಾವ ಅದರಿಂದ ಸುಖ ಪಡುವುದಿಲ್ಲ.
* ಅತ್ಯವಶ್ಯಕವಾದ ವಸ್ತುಗಳನ್ನು ಮಾತ್ರ ಕೊಳ್ಳುತ್ತೇನೆ, ಅನಗತ್ಯ ವಸ್ತುಗಳನ್ನು ಖರೀದಿಸುವುದಿಲ್ಲ.
* ನೀರನ್ನು ಮತ್ತು ವಿದ್ಯುಚ್ಛಕ್ತಿಯನ್ನು ಮಿತವಾಗಿ ಬಳಕೆ ಮಾಡುತ್ತೇವೆ.
* ನನ್ನ ಕೈಲಾದಷ್ಟು ಗಿಡಮರಗಳನ್ನು ನೆಟ್ಟು ಬೆಳೆಸುತ್ತೇನೆ.
* ಸಣ್ಣ ಪುಟ್ಟ ದೂರವನ್ನು ಕ್ರಮಿಸಲು ವಾಹನ ಬಳಸುವುದಿಲ್ಲ, ನಡೆದು ಅಥವಾ ಬೈಸಿಕಲ್ ನಲ್ಲಿ ಹೋಗುತ್ತೇನೆ.
* ನನ್ನ ಶೌಚಾಲಯವನ್ನು ನಾನು ಸ್ವತಃ ಸ್ವಚ್ಛಗೊಳಿಸುತ್ತೇನೆ.
* ಮನೆಯ ಛಾವಣಿಯ ಮೇಲೆ ಬೀಳುವ ಮಳೆ ನೀರನ್ನು ಸಂಗ್ರಹಿಸಿ ಬಳಸುತ್ತೇನೆ.
* ಗೃಹಕೃತ್ಯಕ್ಕೆ, ಸ್ನಾನ ಇತ್ಯಾದಿಗಳಿಗೆ ಬಳಸಿದ ನೀರನ್ನು ಗಿಡಮರಗಳಿಗೆ ಉಣಿಸುತ್ತೇನೆ.
* ಪ್ಯಾಕೆಟ್ ಗಳಲ್ಲಿ ಮಾರಲಾಗುವ ಕೃತಕ ಆಹಾರಗಳನ್ನು ತಿನ್ನುವುದಿಲ್ಲ.
* ಪಾರಂಪರಿಕ ಸಾಗುವಳಿ ಪದ್ಧತಿಗಳನ್ನು ಹಾಗು ಬೀಜ ಸಂರಕ್ಷಣಾ ವಿಧಾನಗಳನ್ನು ಬಲ್ಲವರಿಂದ ಕಲಿತುಕೊಳ್ಳುವ ಪ್ರಯತ್ನಮಾಡುತ್ತೇವೆ.

Tuesday 17 March 2015

2012-13ರರ ರಾಜ್ಯ ಮಟ್ಟದ ಪ್ರತಿಭಾ ಕಾರಂಜಿಯ ನಾಟಕ ಸ್ಪರ್ದೆಯಲ್ಲಿ ನಮ್ಮ ಶಾಲಾ ಮಕ್ಕಳ ನಾಟಕ ಪ್ರಥಮ ಬಹುಮಾನ ಪಡೆದು ಜಿಲ್ಲೆ, ತಾಲೂಕಿಗೆ ಕಿರ್ತಿ ತಂದ ಸಂದರ್ಭದಲ್ಲಿ ದಕ್ಷ ಆಡಳಿತಗಾರ, ಪ್ರಮಾಣಿಕರಾದ ಡಿ.ಕೆ ರವಿ ಅವರಿಂದ ನಾಟಕದಲ್ಲಿಯ ಎಲ್ಲ ಮಕ್ಕಳಿಗೆ, ಗ್ರಾಮಸ್ಥರಿಗೆ ಮತ್ತು ನಮಗೆ 26 ನೇ ಜನೆವರಿ 2013ರಂದು ಸನ್ಮಾನಿಸಿದ್ದರು.
       ಇಂದು ಅವರು ನಮ್ಮೊಂದಿಗೆ ಇಲ್ಲದ ನೆನಪಿನಲ್ಲಿ ಅವರ ವಿಚಾರವನ್ನು ನಾವು ಮೈಗೂಡಿಸಿಕೊಳ್ಳೊಣ...


Wednesday 25 February 2015

ಪಠ್ಯ ಆಧಾರಿತ ನಾಟಕದ ಬ್ರೋಷರ್ ಗಾಗಿ ಚಿತ್ರಗಳು.

ಶಂಕರ ವಿ ಮಿಟ್ಟಲಕೋಡ
೯ ನೆ ತರಗತಿ
ಸ.ಪ್ರೌಶಾಲೆ, ಜಹಗೀರಗುಡದೂರ

Tuesday 10 February 2015

Exploring Education through the Arts, Kali-Kalisu Teacher Grantee presentation, Feb 15, Bangalore


ನಾಲ್ವರು ನಾಟಕ ಶಿಕ್ಷಕರೇ. ನಮ್ಮ ಕಾರ್ಯ ಚಟುವಟಿಕೆಗಳನ್ನು ಎಲ್ಲರೊಂದಿಗೆ ಹಂಚಿಕೊಳ್ಳುತಲಿದ್ದೇವೆ.
ಎಲ್ಲರಿಗೂ ಸ್ವಾಗತ ಬಯಸುತ್ತೇವೆ.

ಗುರುರಾಜ.ಎಲ್

Monday 19 January 2015

ಶಿವರಾಮ್ ಕಾರಂತರ ಮನೆಯಲ್ಲಿ

 ಶಿವರಾಮ ಕಾರಂತರ ಮನೆಗೆ ಬೇಟಿ ನೀಡಿದ್ದು ತುಂಬಾನೇ ವಿಶೇಷದ್ದು. ಗೆಳೆಯ ಸಂತೋಷ ಮಾಲಿನಿ ಮಲ್ಯ ಅವರಿಗೆ ಕರೆ ಮಾಡಿ ನಾವು ಬೇಟಿ ನೀಡುವ ಕುರಿತು ತಿಳಿಸಿದ್ದು, ನಮ್ಮ ಶೈಕ್ಷಣಿಕ ಪ್ರವಾಸದ ವಿಶೇಷ ಬೇಟಿಯಲ್ಲಿ  ನಮಗೆ ಮಾಲಿನಿ ಮಲ್ಯ ಅವರು ರಕ್ಷಿಸಿ ಹೋರಾಟ ನಡೆಸುತ್ತಾ ಬಂದಿರುವುದನ್ನು ನಮ್ಮ ಮುಂದೆ ಬಿಚ್ಚಿ ಇಟ್ಟಾಗ ನಾವು ನಮ್ಮದನ್ನೇ ಉಳಿಸಿಕೊಳ್ಳಲು ಮಾಡಬೇಕಾದ ಪ್ರಯಾಸವನ್ನು ಮನಗಾಣಬೇಕಿದೆ.
 ವಿದ್ಯಾರ್ಥಿಗಳಿಗೆ ನಮ್ಮ ಸಾಹಿತಿಗಳ ಕುರಿತು ಪರಿಚಯವೇ ಇಲ್ಲದಾಗುತ್ತಿರುವ ಈ ದಿನಗಳಲ್ಲಿ ನಾವು ನಮ್ಮ ಪಯಣವನ್ನು ಎತ್ತ ಸಾಗಬೇಕು ಎಂದು ಆಲೋಚಿಸಬೇಕಿದೆ.