
ಶಿವರಾಮ ಕಾರಂತರ ಮನೆಗೆ ಬೇಟಿ ನೀಡಿದ್ದು ತುಂಬಾನೇ ವಿಶೇಷದ್ದು. ಗೆಳೆಯ ಸಂತೋಷ ಮಾಲಿನಿ ಮಲ್ಯ ಅವರಿಗೆ ಕರೆ ಮಾಡಿ ನಾವು ಬೇಟಿ ನೀಡುವ ಕುರಿತು ತಿಳಿಸಿದ್ದು, ನಮ್ಮ ಶೈಕ್ಷಣಿಕ ಪ್ರವಾಸದ ವಿಶೇಷ ಬೇಟಿಯಲ್ಲಿ ನಮಗೆ ಮಾಲಿನಿ ಮಲ್ಯ ಅವರು ರಕ್ಷಿಸಿ ಹೋರಾಟ ನಡೆಸುತ್ತಾ ಬಂದಿರುವುದನ್ನು ನಮ್ಮ ಮುಂದೆ ಬಿಚ್ಚಿ ಇಟ್ಟಾಗ ನಾವು ನಮ್ಮದನ್ನೇ ಉಳಿಸಿಕೊಳ್ಳಲು ಮಾಡಬೇಕಾದ ಪ್ರಯಾಸವನ್ನು ಮನಗಾಣಬೇಕಿದೆ.
ವಿದ್ಯಾರ್ಥಿಗಳಿಗೆ ನಮ್ಮ ಸಾಹಿತಿಗಳ ಕುರಿತು ಪರಿಚಯವೇ ಇಲ್ಲದಾಗುತ್ತಿರುವ ಈ ದಿನಗಳಲ್ಲಿ ನಾವು ನಮ್ಮ ಪಯಣವನ್ನು ಎತ್ತ ಸಾಗಬೇಕು ಎಂದು ಆಲೋಚಿಸಬೇಕಿದೆ.
No comments:
Post a Comment