Saturday 19 June 2021

"ಪ್ರಸಕ್ತ ಸಂದರ್ಭದಲ್ಲಿ ಪ್ರೌಢಶಾಲಾ ಮಕ್ಕಳ ಸಾಮಾಜಿಕ ಮತ್ತು ಭಾವನಾತ್ಮಕ ಕಲಿಕಾ ವಾತಾವರಣ ನಿರ್ಮಾಣದಲ್ಲಿ ರಂಗಕಲಾ ಶಿಕ್ಷಕರ ಪಾತ್ರ."

 ಆತ್ಮೀಯರೆ, 

   ಮಂಜುನಾಥ್ ಸರ್ ಕರೆ ಮಾಡಿ‌ ತುಂಬಾ ಸಂತೋಷದಿಂದ ವೆಬಿನಾರ್ ಕುರಿತು ತಮ ಅಭಿಪ್ರಾಯ ವ್ಯಕ್ತಪಡಿಸಿದರು. ಎಲ್ಲರಿಗೂ ಪಾಲ್ಗೊಳ್ಳುವಿಕೆ ಹಾಗೂ ವಿಚಾರ ಮಂಡನೆ ತುಂಬಾ ಪ್ರಬುದ್ಧವಾಗಿತ್ತೆಂದು ತಿಳಿಸಿದ್ದಾರೆ. ಈ ದಿನ‌ ಅವರು ಮಂಡಿಸಿದ ವಿಚಾರಗಳನ್ನು ಹಾಗು, ನಮ್ಮ ರಂಗ ಶಿಕಷಕ ಬಂದುಗಳು ಹಂಚಿಕೊಂಡ ಅಭಿಪ್ರಾಯಗಳನ್ನು ಸಂಕ್ಷಿಪ್ತ ಟಿಪ್ಪಣಿ ಮಾಡಿ ಕಳುಹಿಸಿದರೆ ಅದನ್ನು ಕೂಡಲೇ DSERT ಹಾಗೂ ಆಯುಕ್ತರ ಗಮನಕ್ಕೆ ತರಲಾಗುವುದು. ಇಂತಹ Pandemic ಸಂದರ್ಭದಲ್ಲಿಯೂ ರಂಗ ಶಿಕ್ಷಕರು ಅತ್ಯಂತ ಕ್ರಿಯಾಶೀಲವಾಗಿ ಪಾಲ್ಗೊಂಡ ಬಗೆಯನ್ನು ಅಧಿಕಾರಿಗಳ ಗಮನಕ್ಕೆ ತಂದು, ಮುಂದಿನ ವೆಬಿನಾರ್ ಲಿ ಇನ್ನಷ್ಟೂ ವಿಚಾರಗಳನ್ನು ಕ್ರೋಢೀಕರಿಸಿ ಕಳುಹಿಸಿಕೊಟ್ಟರೆ ಅದನ್ನು ಕ್ರಿಯಾ ಯೋಜನೆ ರೂಪದಲ್ಲಿ  ಕಳುಹಿಸಲಾಗುತ್ತದೆ ಎಂದು ಹೇಳಿದ್ದಾರೆ ‌.  ಈ ಒಂದು ವೆಬಿನಾರ್ ಆಯೋಜನೆಗೆ ಪಾಲ್ಗೊಂಡು ಯಶಸ್ವಿಯಾಗಿ ನಡೆಸಿಕೊಟ್ಟ ತಮ್ಮೆಲ್ಲರಿಗೂ ಹೃದಯಪೂರ್ವಕ ಅಭಿನಂದನೆಗಳು.  


ರಾಜ್ಯ ಮಟ್ಟದ ಅಧಿಕಾರಿಯೊಬ್ಬರು ತಮ್ಮ ಆಡಳಿತಶಾಹಿ ವ್ಯಕ್ತಿತ್ವವನ್ನು ಬದಿಗಿಟ್ಟು ಅತ್ಯಂತ ಸರಳವಾಗಿ ಪಾಲ್ಗೊಂಡು, ಅದರಲ್ಲೂ ಕಮೂ ನಂತಹ ಪ್ರಮುಖ ಫ್ರೆಂಚ್ ಬರಹಗಾರನ  ತಾವು ಓದಿರುವ The plague ಕೃತಿಯ ಉಲ್ಲೇಖದ ಮೂಲಕ ಪ್ರಸ್ತುತ ಸಂದರ್ಭ ವನ್ನು ಅವಲೋಕಿಸಿ ನಮ್ಮೊಡನೆ ಇಷ್ಟು ಗಂಭೀರವಾಗಿ ಪಾಲ್ಗೊಂಡು ಎರಡು ತಾಸು ತಾಳ್ಮೆಯಿಂದ ಕೇಳಿಸಿಕೊಂಡದ್ದು ನಿಜಕ್ಕೂ ಖುಷಿಯ ವಿಚಾರ.  ಇದು ಆದೇಶವಾಗಿ ಬಂದು ಬಿಡುತ್ತಾ, ನಮಗೆ ತಲುಪುತ್ತಾ ಅಂತ ಯೋಚಿಸುವದಕ್ಕಿಂತ, ಇಂತಹ ಸಂದರ್ಭದಲ್ಲಿಯೂ ನಾವೆಲ್ಲರೂ ಪಾಲ್ಗೊಂಡು ಇಷ್ಟು ಒಳ್ಳೆಯ ,ಘನವಾದ ವಿಚಾರಗಳ ಕುರಿತು ಚರ್ಚಿಸಿದೆವಲ್ಲ ಅದು ತುಂಬಾ ಮಹತ್ವದ್ದು.  ನಮಗೆ ಸರ್ಕಾರ ಪೂರ್ಣ ವೇತನ ಹಾಗೂ ಸೇವಾಭದ್ರತೆ ನೀಡಿದೆ ನಮ್ಮ ಕುಟುಂಬಕ್ಕೆ ನಾವು ಆಧಾರವಾಗಿದ್ದೇವೆ, ಇವೆಲ್ಲವೂ ಸಾಧ್ಯವಾಗಿರುವುದು ಈ ವೃತ್ತಿಯಿಂದ. ಇನ್ನೂ ರಂಗಕಲೆಯನ್ನು ನೆಚ್ಚಿಕೊಂಡು ಬದುಕು ಕಟ್ಟಿಕೊಳ್ಳಲು ಹವಣಿಸುತ್ತಿರುವ ಎಷ್ಟೋ ಮನಸ್ಸುಗಳಿಗೂ ಈ ಅವಕಾಶ ಸಿಗಬೇಕಲ್ಲವೇ? .. ಸಿಗಬೇಕೆಂದರೆ ನಾವು ನಮ್ಮ ಅಧಿಕಾರಿ ವರ್ಗದವರಿಗೆ ತಲುಪಲೇಬೇಕು ಅದಕ್ಕೂ ಇಂತಹ ವೆಬಿನಾರ್ ಗಳು ವೇದಿಕೆಯಾಗುತ್ತವೆ ಎಂಬುದರಲ್ಲಿ ಯಾವ ಅನುಮಾನಗಳೂ ಇಲ್ಲ. ಮತ್ತೊಮ್ಮೆ ನಿಮ್ಮೆಲ್ಲರ ಸಹಕಾರಕ್ಕೆ ನಮ್ಮ ಅಭಿನಂದನೆಗಳು,

" ಪ್ರಸಕ್ತ ಸಂದರ್ಭದಲ್ಲಿ ಪ್ರೌಢಶಾಲಾ ಮಕ್ಕಳ ಸಾಮಾಜಿಕ ಮತ್ತು ಭಾವನಾತ್ಮಕ ಕಲಿಕಾ ವಾತಾವರಣ ನಿರ್ಮಾಣದಲ್ಲಿ ರಂಗಕಲಾ ಶಿಕ್ಷಕರ ಪಾತ್ರ."