Wednesday, 24 September 2014

ಶೈಕ್ಷಣಿಕ ರಂಗಭೂಮಿ - ವಿಚಾರ ಸಂಕಿರಣ




ಇದೇ ತಿಂಗಳು 28 ಭಾನುವಾರ, ಬೆಳಗ್ಗೆ 10ಕ್ಕೆ ರವೀಂದ್ರ ಕಲಾಕ್ಷೇತ್ರದಲ್ಲಿ 'ಕರ್ನಾಟಕ ರಾಜ್ಯ ರಂಗ ಪದವೀಧರರು ಹಾಗೂ ರಂಗಕರ್ಮಿಗಳ ಸಮಾವೇಶ'ವನ್ನು ಕನ್ನಡ ರಂಗಭೂಮಿಯ ಹಿರಿಯ ವಿಮರ್ಶಕರು, ಚಿಂತಕರು, ನಾಟಕಕಾರರು ಆದ ಶ್ರೀ ಕೆ. ಮರುಳಸಿದ್ದಪ್ಪನವರ ಅಧ್ಯಕ್ಷತೆಯಲ್ಲಿ ಹಮ್ಮಿಕೊಳ್ಳಲಾಗಿದೆ. ಶ್ರೀಮತಿ ಉಮಾಶ್ರೀ, ಶ್ರೀ ಪ್ರಸನ್ನ, ಶ್ರೀ ಬಸವಲಿಂಗಯ್ಯ, ಶ್ರೀ ಜನಾರ್ಧನ್ (ಜನ್ನಿ), ಶ್ರೀ ಎಚ್. ಎಸ್. ಉಮೇಶ್ ಮುಂತಾದ ಕನ್ನಡ ರಂಗಭೂಮಿಯ, ನಾಟಕಕಾರರು, ಬರಹಗಾರರು,ನಿರ್ದೇಶಕರು, ವಿನ್ಯಾಸಕಾರರು, ನಟ-ನಟಿಯರು, ಸಂಘಟಕರು, ಶಿಕ್ಷಣ ತಜ್ಞರು, ಟಿ. ವಿ., ಸಿನೇಮಾದಲ್ಲಿ ಕೆಲಸ ಮಾಡುತ್ತಿರುವ ಅನೇಕ ಗೆಳೆಯ-ಗೆಳತಿಯರು, ಕರ್ನಾಟಕದ ಎಲ್ಲ ರಂಗಸಂಸ್ಥೆಗಳು ಮತ್ತು ಕರ್ನಾಟಕ ರಾಜ್ಯದ ಎಲ್ಲಾ ರಂಗಶಾಲೆಗಳ ಪದವೀಧರರು ಭಾಗವಹಿಸುತ್ತಿದ್ದಾರೆ. ನೀವು ಬಂದು ರಂಗಶಿಕ್ಷಣಕ್ಕೆ ಒತ್ತಾಸೆಯಾಗಿ ನಿಲ್ಲಬೇಕೆಂದು ಕೇಳಿಕೊಳ್ಳುತ್ತೇನೆ. ನಿಮ್ಮೆಲ್ಲರ ಬೆಚ್ಚಗಿನ ಪ್ರೀತಿ-ಸಹಕಾರ ಅತ್ಯಂತ ಅವಶ್ಯಕ. ಬನ್ನಿ.

No comments:

Post a Comment