Tuesday, 20 September 2016

ನಾಟಕ ಶಿಕ್ಷಕರ ನೇಮಕಕ್ಕೆ ಮನವಿ

ಇಂದು ನಮ್ಮ ಶಾಲೆಗೆ ಶಿಕ್ಷಕರ ಕ್ಷೇತ್ರದಿಂದ ಚುನಾಯಿತರಾಗಿದ್ದ  ಶ್ರೀ ಶರಣಪ್ಪ ಮಟ್ಟೂರು ಅವರು ಆಗಮಿಸಿದ್ದರು. ಅವರೊಂದಿಗೆ ಮಾತನಾಡುತ್ತಾ 
'ರಾಜ್ಯದಲ್ಲಿ ನಾಟಕ ಶಿಕ್ಷಕರನ್ನು ಕಳೆದ ೨೦೦೮ ರಲ್ಲಿ ನೇಮಕ ಮಾಡಿದ ನಂತರ ಮತ್ತೇ ಗಮನನೇ ನೀಡಲಿಲ್ಲ ಹಾಗಾಗಿ ಹೊಸ ನೇಮಕಾತಿ ಕುರಿತು ತಾವು ಚರ್ಚೆಯನ್ನು ಎತ್ತಿ ಎಂದು ಮನವಿಯನ್ನು ಮಾಡುತ್ತಾ, ಈಗ ಕಾರ್ಯ ನಿರ್ವಹಿಸುತ್ತಿರುವ ನಾಟಕ ಶಿಕ್ಷಕರ ಕಾರ್ಯ ಚಟುವಟಿಕೆಗಳನ್ನು ಗಮನಿಸಿ ಎಲ್ಲರೂ ಸಂಪೂರ್ಣವಾಗಿ ತೊಡಗಿಸಿಕೊಂಡು ಬೋಧನೆ ಜೊತೆಗೆ ಪ್ರಾಯೋಗಿಕವಾಗಿ ಮಕ್ಕಳನ್ನು ತೊಡಗಿಸಿರುವಂತದ್ದು. ಮಕ್ಕಳಿಂದ ಸೃಜನಶೀಲ ಕಾರ್ಯಗಳು ನಿರಂತರವಾಗಿ ಹೊರ ತರುವಲ್ಲಿ ಪ್ರಮಾಣಿಕವಾಗಿ ಪ್ರಯತ್ನ ನಡೆಸುತ್ತಿರುವ ಕುರಿತು ಮನವರಿಕೆ ಮಾಡಿದೆ. ಆದರೆ ಸನ್ಮಾನ್ಯರಿಂದ ವೃತ್ತಿ ಶಿಕ್ಷಕರ ಕುರಿತು ಅಂಥಹ ಆಶಾ ಭಾವನೆ ಕಂಡು ಬರಲಿಲ್ಲ. ನಾನು ರಾಜ್ಯದಲ್ಲಿ ಇರುವ ಎಲ್ಲ ನಾಟಕ ಶಿಕ್ಷಕರ ಕಾರ್ಯ ವೈಖರಿ ಬಗ್ಗೆ  ಅಧ್ಯಯನ ಮಾಡಲು ಮನವಿ ಮಾಡಿರುವೆ.

No comments:

Post a Comment